ಹೋದ ಶನಿವಾರ ನನು ಮತ್ತು ನನ್ನ ಕುಟುಂಬ ವಿಜಯನಗರ ದಿಂದ ಬಿ ಟಿ ಎಮ್ ಬಡಾವಣೆಗೆ ಆಟೋ ನಲ್ಲಿ ಹೋಗ್ತಾ ಇದ್ವಿ. ಹಾಗೇ ಹೋಗುವಾಗ ನಾನು ಆಟೋ ಮೀಟರ್ ನೋಡ್ತಾ ಕೂತಿದ್ದೆ, ಮೀಟರ್ ಇದ್ದಕ್ಕೆ ಇದ್ದ ಹಾಗೇ ಆಟೋ ಗಿಂತ ಜೋರಾಗಿ ಓಡಲು ಶುರು ಅಯಿತು. ಜಯನಗರ್ ೪ ನೆ ಹಂತಕ್ಕೆ ಬರುವ ವೇಳೆಗೆ ೯೫ ರುಪಾಯಿ ದಾಟಿತ್ತು. ನನಗೆ ಆಗಲೇ ಗೊತ್ತಾಯಿತು ಆಟೋ ಮೀಟರ್ ಸರಿ ಇಲ್ಲ ಅಂಥ. ಡ್ರೈವರ್ ಗೆ ಆಟೋ ನಿಲ್ಲಿಸಲ್ಲಿಕೆ ಹೇಳಿ ನಾನು ಆಟೋ ಇಳಿದು ಹಣ ಕೊಡುವಾಗ ಆತನನ್ನು ವಿಜಯನಗರ ದಿಂದ ಜಯನಗರಕ್ಕೆ ಎಸ್ಟು ದೂರ ಅಂತ ಕೇಳಿದರೆ ಅವನು ದೂರ ಗೀರ ನಂಗೆ ಗೊತ್ತಿಲ್ಲ ಮೀಟರ್ ನಲ್ಲಿ ಎಸ್ಟು ತೋರಿಸ್ತಿದೆಯೋ ಅಸ್ತು ಕೊಡಿ ಅಂದ.
ನಂಗೆ ಗೊತ್ತಿರುವ ಹಾಗೇ ವಿಜಯನಗರ ದಿಂದ ಜಯನಗರ ದ ವರೆಗೆ ೧೦ ಕಿ. ಮೀ. ಆಗುತ್ತೆ ಅಂದ್ರೆ ೭೦ ರುಪಾಯಿ ಆಗಬೇಕು ಅದ್ರೆ ಆಟೋ ಮೀಟರ್ ನಲ್ಲಿ ೯೫ ರುಪಾಯಿ ಆಗಿತ್ತು. ನಾನು ಯೀ ದಾರಿ ನಲ್ಲಿ ೧೦ ವರ್ಷದಿಂದ ಓಡಾಡ್ತ ಇದ್ಹಿನಿ ನಂಗೆ ಗೊತ್ತಿರುವ ಹಾಗೇ ೧೦ ಕಿ. ಮೀ. ಆಗುತ್ತೆ ಅಂತ ಆಟೋ ಡ್ರೈವರ್ ಗೆ ಹೇಳಿದ್ರೆ ಅವ್ನು "ಆಟೋ ಗೂ ಟು ವ್ಹೀಲೆರ್ ಗೂ ಒಂದೇನ ಸರ್ ?" ಅಂತ ಜೋರು ಮಾಡೋಕೆ ಶುರು ಮಾಡಿದ.
ನಂಗೆ ಜಗಳ ಮಾಡಲು ಮನಸಿಲ್ಲದೆ ಅವನಿಗೆ ಹಣ ಕೊಟ್ಟು "ಕಷ್ಟ ಪಟ್ಟು ಹಣ ಗಳಿಸಿ ಅದು ಇರುತ್ತೆ, ಮೋಸ ಮಾಡಿರೋದು ಇರೋಲ್ಲ" ಅಂತ ಹೇಳಿ ಅಲ್ಲಿಂದ ವಿಧಿ ಇಲ್ಲದೆ ಬೇರೆ ಆಟೋ ನಲ್ಲಿ ಮನೆ ಸೇರಿದ್ವಿ.